Wednesday, October 27, 2010

Amisha-patel-to-visit-kukke-temple

Bollywood actress Amisha Patel who made her debut with Kaho Naa Pyar Hai is expected to visit the famous Kukke Subrahmanya Temple on Saturday. The temple located about 105 km from Mangalore lies on the banks of the river Kumaradhara and is often frequented by politicians, bollywood celebrities and sports persons.

ಬಾಲಿವುಡ್ ತಾರೆ ಅಮಿಷಾ ಪಟೇಲ್ ಶನಿವಾರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು. ಆಕೆಗೆ ಸರ್ಪ ದೋಷವಿರುವ ಕಾರಣ ಬಾಲಿವುಡ್‌ನಲ್ಲಿ ಆಕೆಯ ಗ್ರಾಫ್ ಇಳಿಮುಖವಾಗಿದೆಯಂತೆ. ಸರ್ಪದೋಷ ನಿವಾರಣೆಯಾದರೆ ಎಲ್ಲವೂ ಸರಿ ಹೋಗುತ್ತದೆ ಎಂದು ಜ್ಯೋತಿಷಿಗಳೊಬ್ಬರು ಸಲಹೆ ನೀಡಿದ್ದರಂತೆ.

ಹಾಗಾಗಿ ಆಕೆ ಶನಿವಾರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿ ಸರ್ಪ ಸಂಸ್ಕಾರ ಪೂಜೆ ಸಲ್ಲಿಸಿದರು. ಮಂಗಳೂರಿನಿಂದ 105 ಕಿ.ಮೀ ದೂರದಲ್ಲಿರುವ ಕುಕ್ಕೆ ಕುಮಾರಧಾರಾ ನದಿ ದಡದಲ್ಲಿದೆ. ಬಹುತೇಕ ರಾಜಕಾರಣಿಗಳು, ಸಿನಿಮಾ ತಾರೆಗಳು ಹಾಗೂ ಕ್ರೀಡಾಪಟುಗಳು ಕುಕ್ಕೆಗೆ ಆಗಾಗ ಆಗಮಿಸಿ ವಿಶೇಷ ಪೂಜೆ ಸಲ್ಲಿಸುತ್ತಿರುತ್ತಾರೆ.

ಶನಿವಾರ ಮತ್ತು ಭಾನುವಾರ ಸರ್ಪ ಸಂಸ್ಕಾರ ಪೂಜೆಯನ್ನು ಅಮಿಷಾ ಪಟೇಲ್ ಸಲ್ಲಿಸಲಿದ್ದಾರೆ. ಹಿಂದಿಯಲ್ಲಿ ಆಕೆ ಅಭಿನಯದ ಹ್ಯಾಪಿ ಬರ್ತ್ ಡೇ, ಪವರ್ ಸೇರಿದಂತೆ ತೆಲುಗಿನಲ್ಲಿ ಪರಮವೀರ ಚಕ್ರ, ಕಾಂಟ್ರಾಕ್ಟ್ ಚಿತ್ರಗಳು ತೆರೆಕಾಣಬೇಕಾಗಿವೆ. ತಮ್ಮ ಚೊಚ್ಚಲ 'ಕಹೋನಾ ಪ್ಯಾರ್ ಹೈ' ಚಿತ್ರದ ಮೂಲಕ ಭರ್ಜರಿ ಖಾತೆ ತೆರೆದ ಅಮಿಷಾ ಬಳಿಕ ಆರಕ್ಕೇರದೆ ಮೂರಕ್ಕಿಳಿಯದ್ದು ದುರಂತ.

No comments:

Post a Comment